ಜೊಹನ್ನಾಸ್ ವಿ. ಜೆನ್ಸೆನ್(20 ಜನವರಿ 1873 – 25 ನವೆಂಬರ್ 1950)ಡೆನ್ಮಾರ್ಕ್ ದೇಶದ ಲೇಖಕ. ಇವರನ್ನು ೨೦ನೆಯ ಶತಮಾನದ ಶ್ರೇಷ್ಠ ಡಾನಿಶ್ ಲೇಖಕ ಎಂದು ಪರಿಗಣಿಸುತ್ತಾರೆ. ಇವರಿಗೆ ೧೯೪೪ರ ಸಾಲಿನ ಸಾಹಿತ್ಯದ ನೋಬೆಲ್ ಪ್ರಶಸ್ತಿ ದೊರೆತಿದೆ.ಇವರ ಸೋದರಿ ಥಿಟ್ ಜೆನ್ಸೆನ್ ಕೂಡಾ ಬರಹಗಾರ್ತಿಯಾಗಿದ್ದು ಪ್ರಾರಂಭದ ಸ್ತ್ರೀವಾದಿಗಳಲ್ಲಿ ಒಬ್ಬರು. == ಬಾಲ್ಯ == ಇವರು ಡೆನ್ಮಾರ್ಕ್‍ನ ಒಂದು ಹಳ್ಳಿಯಲ್ಲಿ ಒಬ್ಬ ಪಶುವೈದ್ಯನ ಮಗನಾಗಿ ಜನಿಸಿದರು. ಅದೇ ಹಳ್ಳಿಯ ವಾತಾವರಣದಲ್ಲಿ ಇವರ ವಿದ್ಯಾಭ್ಯಾಸ ನಡೆಯಿತು. ವೈದ್ಯಕೀಯ ಉನ್ನತ ವ್ಯಾಸಂಗಕ್ಕಾಗಿ ಇವರು ಕೊಪೆನ್‍ಹೇಗನ್ನ ವಿಶ್ವವಿದ್ಯಾಲಯಕ್ಕೆ ಸೇರಿದರು. ವಿದ್ಯಾಭ್ಯಾಸದ ಖರ್ಚಿಗೆ ಲೇಖಕರಾಗಿ ದುಡಿದರು.ಮೂರು ವರ್ಷ ವೈದ್ಯಕೀಯ ವ್ಯಾಸಂಗದ ಬಳಿಕ ವ್ಯಾಸಂಗವನ್ನು ತೊರೆದು ಪೂರ್ಣಕಾಲಿಕ ಲೇಖಕನಾಗಿ ಸಾಹಿತ್ಯಕ್ಕೆ ತನ್ನ ಜೀವನವನ್ನು ಮುಡಿಪಾಗಿಟ್ಟರು. == ಉಲ್ಲೇಖಗಳು == == ಬಾಹ್ಯ ಸಂಪರ್ಕಗಳು == . ಜೊಹನ್ನಾಸ್ ವಿ. ಜೆನ್ಸೆನ್